ಸಮಿತಿ
ಸದ್ಗುರು ಶ್ರೀಶ್ರೀಶ್ರೀ ರಾಮಾನಂದ ಸ್ವಾಮಿ ಆಶ್ರಮ ವಿಶ್ವಸ್ಥ ಸಮಿತಿ (ರಿ) (ಎಸ್.ಎಸ್.ಆರ್.ಎಸ್.ಎ ವಿಶ್ವಸ್ಥ ಸಮಿತಿ)
ಈ ಹಿಂದೆ 26-06-1979 ರಲ್ಲಿ ಧರ್ಮ ಪ್ರವರ್ತಕರಾದ ಸದ್ಗುಣ ಶ್ರೀಶ್ರೀಶ್ರೀ
ರಾಮಾನಂದ ಸ್ವಾಮಿಯವರು ಶ್ರೀಮದ್ ದತ್ತಾತ್ರೇಯ ಆಶ್ರಮವನ್ನು ಸ್ಥಾಪಿಸಿ ಅವರ
ಅಧ್ಯಕ್ಷತೆಯಲ್ಲಿ ಆಶ್ರಮದ ನಿರ್ವಹಣೆಗಾಗಿ ಹಾಗೂ ಆಶ್ರಮದ ಉದ್ದೇಶಗಳನ್ನು
ಸಾಧಿಸುವುದಕ್ಕಾಗಿ ದಿನಾಂಕ: 07/02/1990ರಲ್ಲಿ ಎಂಟು ಜನರನ್ನೊಳಗೊಂಡ ಒಂದು
ಸಮಿತಿಯನ್ನು ನೋಂದಾಯಿಸಲ್ಪಟ್ಟಿತ್ತು. ಟ್ರಸ್‌ಟ್‌ನ ಅಧ್ಯಕ್ಷರು ಹಾಗೂ ಇತರೆ
ಸದಸ್ಯರೆಲ್ಲರೂ ಭಗವದೈಕ್ಯರಾದ ಕಾರಣ ಟ್ರಸ್‌ಟ್‌ನ ಪೂರ್ವ ನಿಯಮಾವಳಿಯಂತೆ
ಹಾಗೂ ಸದ್ಗುರು ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರು ನೀಡಿದ್ದ ಅಪ್ಪಣೆಯಂತೆ ಈ
ಮೂಲ ಟ್ರಸ್‌ಟ್‌ಗೆ ಹೊಸ ನಿಯಮಗಳನ್ನು ಮತ್ತು ಹೊಸ ಸದಸ್ಯರುಗಳನ್ನು ಟ್ರಸ್‌ಟ್
ನಿಯಮಾನುಸಾರ ಸೇರ್ಪಡೆ ಮಾಡುವುದಕ್ಕಾಗಿ ಹಳೇ ಟ್ರಸ್‌ಟ್‌ನ್ನು ರದ್ದುಗೊಳಿಸಿ
ನೂತನ ಸಮಿತಿಯನ್ನು ರಚಿಸಲು ದಿನಾಂಕ: 17/02/2015 ರಂದು ಪ್ರಸಕ್ತ
ಪೀಠಾಧ್ಯಕ್ಷರಾಗಿರುವ ಸದ್ಗುರು ಶ್ರೀಶ್ರೀಶ್ರೀ ಮಾತೇ ಮುಕ್ತಾಂಬಿಕೇದೇವಿಯವರ
ಅಧ್ಯಕ್ಷತೆಯಲ್ಲಿ ಆಶ್ರಮದಲ್ಲಿ ಶಿಷ್ಯವೃಂದವೆಲ್ಲಾ ಸಭೆ ಸೇರಿ ನೂತನ ಸಮಿತಿ ರಚನೆಗೆ
ಒಮ್ಮತದಿಂದ ಒಪ್ಪಿಗೆ ಪಡೆಯಲಾಯಿತು.


ಅದರಂತೆ ದಿನಾಂಕ: 02/03/2015 ರಂದು ಆಶ್ರಮದ ನೂತನ ಆಡಳಿತ ಮಂಡಳಿಯಿಂದ ಹೊಸ ಸಮಿತಿಯನ್ನು ರಚಿಸಿ ಸದ್ಗುರು ಶ್ರೀಶ್ರೀಶ್ರೀ ರಾಮಾನಂದಸ್ವಾಮಿ ಆಶ್ರಮ ವಿಶ್ವಸ್ಥ ಸಮಿತಿ ಎಂಬ ಹೆಸರಿನಿಂದ ನೋಂದಾಯಿಸಲಾಯಿತು. ನೂತನ ಸಮಿತಿಯ ಪೀಠಾಧ್ಯಕ್ಷರಾಗಿ ಸದ್ಗುರು ಶ್ರೀಶ್ರೀಶ್ರೀ ಮಾತೇ ಮುಕ್ತಾಂಬಿಕೇದೇವಿಯವರ ಸರ್ವ ಸಮ್ಮತಿಯಿಂದ ಉಳಿದ ಹದಿನೈದು ಜನ ಸ್ವಯಂ ಸೇವಕರನ್ನು ಆಡಳಿತ ಮಂಡಳಿ ಸಮಿತಿ ಸದಸ್ಯರನ್ನಾಗಿ ನೇಮಸಿದರು.
ಆಶ್ರಮದ ಆಡಳಿತ ಮಂಡಳಿಯಾದ ಈ ಸಮಿತಿಯು ಆಶ್ರಮದ ಎಲ್ಲ ಕಾರ್ಯಕ್ರಮಗಳ ನಿರ್ವಹಣೆಯನ್ನು ಮಾಡುತ್ತದೆ. ಭಜನೆ, ಕೀರ್ತನೆ, ಧಾರ್ಮಿಕ, ಆಧ್ಯಾತ್ಮಿಕ, ತಾಂತ್ರಿಕ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತನ್ಮೂಲಕ ಸಮಾಜ ಸೇವೆ ಮಾಡುವ ಜವಾಬ್ದಾರಿಯನ್ನು ಈ ಸಮಿತಿ ಹಮ್ಮಿಕೊಳ್ಳಲಾಗುತ್ತದೆ. ಉತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿನ ಉತ್ತಮ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುತ್ತದೆ.