ಆದಿಗುರು ಶ್ರೀಶ್ರೀಶ್ರೀ ದತ್ತಾತ್ರೇಯ ಸ್ವಾಮಿಯು ಸ್ಥಾಪಿಸಿದ ಈ ಸನಾತನವಾದ ಪ್ರಣವ ಪೀಠವೆಂಬ ಸದ್ಗುರು ಪರಂಪರೆಯಲ್ಲಿ ಹದಿನೇಳು ಸದ್ಗುರುಗಳು ಸೇವೆ ಸಲ್ಲಿಸಿ ಕೃತಾರ್ಥರಾಗಿ ಪ್ರಸ್ತುತ ಹದಿನೆಂಟನೆಯವರು ಪರಂಪರಾನುಗತ ಸದ್ಗುರು ಪೀಠವನ್ನು ಅಲಂಕರಿಸಿದ್ದಾರೆ.