ಚಟುವಟಿಕೆಗಳು

ANNADHAANAM
ಅನ್ನದಾಸೋಹ:- ಪ್ರತಿ ದಿನ ಬರುವ ಭಕ್ತಾಧಿಗಳಿಗೆ ಉಚಿತ ಅನ್ನ ಪ್ರಸಾದವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಹುಣ್ಣಿಮೆಯ ದಿನ ಬರುವ ಸಾವಿರಾರು ಭಕ್ತಾದಿಗಳು ಹಾಗೂ ಯಾತ್ರಿಕರಿಗೆ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಅನ್ನ ಪ್ರಸಾದವಾಗಿ ವಿತರಿಸಲಾಗುತ್ತದೆ.

VIDHYADHAANAM
ವಿದ್ಯಾದಾನ:- ಪ್ರತಿ ವರ್ಷ ಬಡ ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು, ಸ್ಕೂಲ್ ಬ್ಯಾಗ್ಗಳು ಮತ್ತು ಇತರೆ ಶೈಕ್ಷಣಿಕ ಉಪಕರಣಗಳನ್ನು ವಿತರಿಸಲಾಗುತ್ತದೆ. ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸವನ್ನು ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಗುತ್ತದೆ.

VASTRADHAANAM
ವಸ್ತ್ರದಾನ:- ಸದ್ಗುರು ಆರಾಧನೆ ಜಯಂತೋತ್ಸವ ಹಾಗೂ ಇತರೆ ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಬಟ್ಟೆ, ಹಾಗೂ ಹೊದಿಕೆಗಳನ್ನು ವಿತರಿಸಲಾಗುವುದು.

AROGYADHAANAM
ಆರೋಗ್ಯದಾನ:- ಉಚಿತವಾದ ಆರೋಗ್ಯ ಶಿಬಿರಗಳನ್ನು ಅಶ್ರಮದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇಲ್ಲಿ ಎಲ್ಲರಿಗೂ ಪ್ರವೇಶವಿರುತ್ತದೆ. ಸುದೀರ್ಘವಾದ ಖಾಯಿಲೆಗಳಿಂದ ಹಾಗೂ ವಿಪರೀತವಾದ ಖಾಯಿಲೆಗಳಿಂದ ಬರುವ ಬಡರೋಗಿಗಳಿಗೆ ಉಚಿತವಾಗಿ ಔಷದಿಗಳನ್ನು ವಿತರಿಸಲಾಗುವುದು.

ಅನ್ನದಾನಂ
ಜ್ಞಾನದಾನ :- ಸಮಾಜವನ್ನು ಸಂಸ್ಕರಿಸಲು ಮತ್ತು ಸುಶಿಕ್ಷಿತ ಸಮುದಾಯವನ್ನು ಸೃಷ್ಠಿಸಲು ಧಾರ್ಮಿಕ, ಆಧ್ಯಾತ್ಮಿಕ, ತಾಂತ್ರಿಕ, ಪೌರಾಣಿಕ, ಐತಿಹಾಸಿಕ, ಮೌಲಿಕ, ಸಾಂಪ್ರದಾಯಿಕ, ವೈದ್ಯಕೀಯ ಆಯುರ್ವೇದ, ಯೋಗ, ನೀತಿ, ಧ್ಯಾನ, ಮುಂತಾದ ವಿಷಯಗಳನ್ನು ಕುರಿತಾದ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ವಿತರಿಸಲಾಗುವುದು.

PRAKRUTHI VANDANAM
ಪ್ರಕೃತಿ ವಂದನೆ :- ಮಳೆ ನೀರು ಸಂಗ್ರಹ, ಅರಣ್ಯೀಕರಣ, ಪರಿಸರ ಸಂರಕ್ಷಣೆ, ವನ್ಯಜೀವಿ ಮತ್ತು ಇತರೆ ಅಳಿವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆ, ಗಿಡ ಮರಗಳ ಉಪಯುಕ್ತತೆ ಕುರಿತಾದ ಕಾರ್ಯಗಾರಗಳನ್ನು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು.

KAALAGNAANAM
ಕಾಲಜ್ಞಾನ :- ಪಂಚಾಂಗಯುಕ್ತವಾದ ದಿನದರ್ಶಿಕೆಯನ್ನು ಪ್ರತಿ ಸಂವತ್ಸರ ಎಲ್ಲರಿಗೂ ಉಚಿತವಾಗಿ ವಿತರಿಸಲಾಗುವುದು.

GOURAVA PRADHAANAM
ಗೌರವ ಪ್ರದಾನ :-ವಿಶೇಷ ಸಂಧರ್ಭಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.